ನಮ್ಮ ಬಗ್ಗೆ

ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿರುವ ಕರ್ನಾಟಕದ ಕರಾವಳಿಯಲ್ಲಿ ದುರ್ಗಾ ದೇವಿಯ ಆರಾಧನೆ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅಂಥಹುದೇ ಒಂದು ಮಹತ್ವ ಹೊಂದಿರುವಂತಹ ದೇವಿ ದೇವಸ್ಥಾನಗಳಲ್ಲಿ ನಮ್ಮ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಒಂದು. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು ಅಂಪಾರುಪುರದ ಅರಸನಾದ ನಂದೂರಾಯನ ಆಳ್ವಿಕೆಯಲ್ಲಿ ಪ್ರತಿಷ್ಠಾಪನೆಗೊಂಡಿತ್ತು. ಅಂದಿನಿಂದ ಇಂದಿನ ವರೆಗೆ ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ತನ್ನ ಪರಿವಾರ ದೇವತೆಗಳಾದ ಶ್ರೀ ವೀರಭದ್ರ ಮತ್ತು ಶ್ರೀ ನಾಗದೇವರ ವಿಗ್ರಹಗಳೊಂದಿಗೆ ಇಲ್ಲಿಯೇ ನೆಲೆಗೊಂಡಿದ್ದಾಳೆ.

ವಿಗ್ರಹಗಳು

ಶ್ರೀ ಮಹಿಷಮರ್ದಿನಿ ದೇವಿ

ಸುಮಾರು 800 ವರ್ಷಗಳ ಹಿಂದೆ ರಾಜರ ಆಳ್ವಿಕೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಅಂಪಾರಿನ ಶ್ರೀ ಮಹಿಷಮರ್ದಿನಿ ದೇವಿಯು ಈ ಕ್ಷೇತ್ರದ ಪ್ರಮುಖ ಆಕರ್ಷಣೆ. ಇಲ್ಲಿನ ವಿಗ್ರಹದ ವಿವೇಶತೆ ಏನೆಂದರ ಇಲ್ಲಿನ ಮಹಿಷಮರ್ದಿನಿ ಎರಡೇ ಭುಜಗಳನ್ನು ಹೊಂದಿರುವುದು.

ಶ್ರೀ ವೀರಭದ್ರ ದೇವರು

ದುರ್ಗಾಪರಮೇಶ್ವರಿಯ ದೇವಸ್ಥಾನಯೆಂದರೆ ಅಲ್ಲಿ ದೇವಿಯ ಪರಿವಾರದೇವರಾದ ವೀರಭದ್ರನ ಸನ್ನಿಧಾನವಿಲ್ಲದಿರುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂಪಾರಿನ ಗ್ರಾಮ ದೇವತೆಯಾಗಿ ನೆಲೆಗೊಂಡಿರುವ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ಕೂಡ ಪ್ರಮುಖ ಪರಿವಾರ ದೇವರೆಂದರೆ ಇಲ್ಲಿನ ವೀರಭದ್ರ ದೇವರ ಸನ್ನಿಧಾನ.

ನಾಗ ದೇವರು

ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿರುವ ಕರಾವಳಿಯಲ್ಲಿ ನಾಗ ದೇವತಾರಾಧನೆ ಕೂಡ ಒಂದು ಪ್ರಮುಖ ವಿಶೇಷ ಆಚರಣೆ. ಇಲ್ಲಿನ ಮಣ್ಣಿನ ಜೋತೆಗೆ ಐಕ್ಯವಾಗಿರುವ ಶ್ರೀ ನಾಗದೇವರು ಈ ಇಡೀ ಕ್ಷೇತ್ರವನ್ನು ವ್ಯಾಪಿಸಿಕೊಂಡು ನಂಬಿ ನಡೆಯುವ ಭಕ್ತ ಜನರನ್ನು ಉದ್ದರಿಸುತ್ತ ನಂಬದೆ ಉಪೇಕ್ಷಿಸುವವರನ್ನು ಶಿಕ್ಷಿಸುತ್ತ ಇಡೀ ಕರಾವಳಿಯುದ್ಧಕ್ಕೂ ಮನೆ ಮಾತಾಗಿದ್ದಾರೆ.

ಸೇವೆಗಳು

01.

Ranga Pooje

02.

Ranga Pooje

03.

Ranga Pooje

More

ಜೀವನದ ಸಮೃದ್ಧಿಗಾಗಿ ಶ್ರೀ ಮಹಿಷಮರ್ದಿನಿ ದೇವಿಯ ಆಶೀರ್ವಾದ ಪಡೆಯಲು ನಮ್ಮನ್ನು ಭೇಟಿ ಮಾಡಿ

ದಾನ

ನಮ್ಮ ದೇವಸ್ಥಾನವು ಶ್ರೀ ಮಹಿಷಮರ್ದಿನಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಡೆಸಲಾಗುತ್ತಿದೆ. ನಾಣಿಗೆಯನ್ನು ನಗದು, ಚೆಕ್, ಡಿಮಾಂಡ್ ಡ್ರಾಫ್ಟ್, ಡೆಬಿಟ್ ಕಾರ್ಡ್ಸ್, ಕ್ರೆಡಿಟ್ ಕಾರ್ಡ್ಸ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ (ನೆಟ್ ಬ್ಯಾಂಕಿಂಗ್) ಮೂಲಕ ನೀಡಬಾಹುದು

ವ್ಯವಸ್ಥಾಪಕ ಟ್ರಸ್ಟಿ

ಅಂಪಾರಿನ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಇದುವರೆಗೂ ಅನುವಂಶಿಕ ಆಡಳಿತ ಮೋಕ್ತೆಸರರ ಮೂಲಕವೇ ನಡೆಯುತ್ತಿದೆ. ಇಲ್ಲಿಯ ಪೂಜಾ ಕೈಂಕರ್ಯವು ಕೂಡಾ ಚೌಳಿಕೆರೆ ಮೂಲದವರಾದ ಅನಂತ ಭಟ್ಟರಿಂದ ಶುರುವಾಗಿ, ಅವರ ವಂಶಜರಿಂದಲೇ ಈ ವರೆಗು ನಡೆಯುತ್ತಾ ಬಂದಿದೆ. ದೈವಜ್ಞರಾದ ಅನಂತ ಭಟ್ಟರು ಸ್ವತಃ ಮಂತ್ರವಾದ ಕಲಿತ ಪ್ರಕಾಂಡ ಜ್ಯೋತಿಷಿಗಳಾಗಿದ್ದರು. ಅವರ ನಂತರ ಅವರ ಮಗ ಸುಬ್ರಾಯ ಭಟ್ಟರು ಸ್ವತಃ ನಾಗಪಾತ್ರಿಗಳಾಗಿದ್ದರು. ನಂತರ ಅವರ ಮಗ ಅನಂತ ಭಟ್ಟರು ಜ್ಯೋತಿಷ್ಯ ವೃತಿಯನ್ನೇ ಮುಂದುವರೆಸಿಕೊಂಡು ಶ್ರೀ ದೇವಿಯ ಪೂಜಾ ಕೈಕರ್ಯಕ್ಕೆ ಸಮರ್ಪಿತರಾಗಿದ್ದರು. ನಂತರ ಅವರ ಮಗ ಸುಬ್ರಾಯ ಭಟ್ಟರು ಕೂಡಾ ಪ್ರಸಿದ್ಧ ನಾಗ ಪಾತ್ರಿಗಳಾಗಿದ್ದರು. ನಂತರ ಅವರ ಮಗ ಗಣಪತಿ ಭಟ್ಟರು ದೇವಸ್ಥಾನದ ಹತ್ತಿರದಲ್ಲಿ ಕಲ್ಯಾಣಮಂಟಪವನ್ನು ಕಟ್ಟಿ ಅದರ ವ್ಯವಸ್ಥಾಪಕರಾಗಿ ಜೊತೆಗೆ ದೇವಿಯ ಪೂಜಾ ಕೈಂಕರ್ಯವನ್ನು ಯಾವುದೇ ಲೋಪ ಬಾರದ ರೀತಿಯಲ್ಲಿ ನಡೆಸಿಕೊಂಡು ಹೋಗುತಿದ್ದರು. ಅವರ ಕಾಲಾ ನಂತರ ಅವರ ಮಗ ಶ್ರೀ ರವಿರಾಜ್ ಭಟ್ ಅವರು ಆಡಳಿತವನ್ನು ವ್ಯವಸ್ಥಾಪಕ ಟ್ರಸ್ಟಿ ಆಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ನವೀಕರಣ ಕಾರ್ಯಕ್ರಮ

ಶ್ರೀ ದೇವಿಯ ಇಚ್ಛೆಯಂತೆ ದೇವಿಯ ವಿಗ್ರಹ ಬದಲಾವಣೆ 2010ರಲ್ಲಿ ಪ್ರಸ್ತುತ ವ್ಯವಸ್ಥಾಪಕರಾದ ರವಿರಾಜ್ ಭಟ್ಟರ ನೇತೃತ್ವದಲ್ಲಿ ನಡೆಯಿತಾದರೂ ಪ್ರಸಕ್ತವಾಗಿ ಶ್ರೀ ದೇವಿಯ ಇಚ್ಛೆಯಂತೆ ಶ್ರೀ ಮಹಿಷಮರ್ದಿನಿ ದೇಗುಲವನ್ನು ಜೀರ್ಣೋದ್ದಾರ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಮಹಿಷಮರ್ದಿನಿಯ ಶಿಲಾಮಯ ಗರ್ಭಗುಡಿ ಮಾಡಿ ಅದಕ್ಕೆ ತಾಮ್ರದ ಹೊದಿಕೆ ಮಾಡುವ ಯೋಜನೆ ಇದೆ. ಹಾಗೆಯೇ ದೇವಸ್ಥಾನಕ್ಕೆ ಸಂಬಂಧ ಪಟ್ಟಂತೆ ಸುತ್ತು ಪೌಳಿ, ಹೊರ ಪೌಳಿ, ಮುಖಮಂಟಪ, ಪುಷ್ಕರಿಣಿ, ಮುಖ್ಯದ್ವಾರ, ಪಾಕಶಾಲೆ, ಅನ್ನ ಛತ್ರ ಮೊದಲಾದ ಹಲವು ಯೋಜನೆಗಳನ್ನು ಈ ಜೀರ್ಣೋದ್ದಾರ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಜನರು ಏನು ಹೇಳುತ್ತಾರೆಂದು ನೋಡಿ...

ನೀವು ಸ್ಥಳದಲ್ಲಿ ನಂಬಿಕೆಯನ್ನು ಹೊಂದಿದ್ದರೆ ಮತ್ತು ಅಲ್ಲಿನ ಜನರನ್ನು ನಂಬಿದರೆ, ನಿಮ್ಮ ಕಾರ್ಯಗಳು ನೆರವೇರುತ್ತವೆ ಮತ್ತು ನಿಮ್ಮ ಸಮಸ್ಯೆಯು ಪರಿಹರಿಸಲ್ಪಡುತ್ತದೆ. ನಮ್ಮನ್ನು ತುಂಬಾ ದಯೆಯಿಂದ ನಡೆಸಿಕೊಳ್ಳಲಾಯಿತು, ಮತ್ತು ನಾನು ಆ ದೇವಸ್ಥಾನಕ್ಕೆ ಮತ್ತೊಮ್ಮೆ ಭೇಟಿ ನೀಡಲು ಇಷ್ಟಪಡುತ್ತೇನೆ.

ವೈಶಾಲಿ ಭಟ್

ಭಕ್ತಾದಿಗಳು

ಅಂಪಾರುನಲ್ಲಿರುವ ಈ ದೇವಾಲಯವು ನನಗೆ ಮತ್ತು ನನ್ನ ಕುಟುಂಬಕ್ಕೆ ನಿಜವಾಗಿಯೂ ಆಶೀರ್ವಾದವಾಗಿದೆ ಮತ್ತು ಇದು ನಮ್ಮ ಜೀವನವನ್ನು ಬದಲಾಯಿಸಿದೆ. ಅಂಪಾರುನಲ್ಲಿರುವ ಈ ದೇವಾಲಯವು ನನಗೆ ಮತ್ತು ನನ್ನ ಕುಟುಂಬಕ್ಕೆ ನಿಜವಾಗಿಯೂ ಆಶೀರ್ವಾದವಾಗಿದೆ ಮತ್ತು ಇದು ನಮ್ಮ ಜೀವನವನ್ನು ಬದಲಾಯಿಸಿದೆ. 

ತ್ರಿವಿಕ್ರಮ ಹತ್ವಾರ್

ಭಕ್ತಾದಿಗಳು

ತಮ್ಮ ಜೀವನದಲ್ಲಿ “ಭರವಸೆಯ ಕಿರಣ” ವನ್ನು ಹುಡುಕುತ್ತಿರುವವರು/ಯಾವ ಮಾರ್ಗವು ಉತ್ತಮ ಎಂದು ವಿಂಗಡಿಸಬೇಕಾದವರಿಗೆ ಒಂದು ಸ್ನೇಹಪರ ಸಲಹೆ, ದೇವಸ್ಥಾನಕ್ಕೆ ಭೇಟಿ ನೀಡಬೇಕು ಮತ್ತು ಮಹಿಷಮರ್ದಿನಿ ಅಮ್ಮನವರ ಆಶೀರ್ವಾದವನ್ನು ಹೊಂದಿರಬೇಕು.

ವಿಶ್ವಾಸ್ ಗೋಟ

ಭಕ್ತಾದಿಗಳು

knKannada