ನಾಗ ದೇವರು
ನಾಗ ದೇವರು
ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ದಿಯಾಗಿರುವ ಕರಾವಳಿಯಲ್ಲಿ ನಾಗ ದೇವತಾರಾಧನೆ ಕೂಡ ಒಂದು ಪ್ರಮುಖ ವಿಶೇಷ ಆಚರಣೆ. ಇಲ್ಲಿನ ಮಣ್ಣಿನ ಜೊತೆಗೆ ಐಕ್ಯವಾಗಿರುವ ಶ್ರೀ ನಾಗದೇವರು ಈ ಇಡೀ ಕ್ಷೇತ್ರವನ್ನು ವ್ಯಾಪಿಸಿಕೊಂಡು ನಂಬಿ ನಡೆಯುವ ಭಕ್ತ ಜನರನ್ನು ಉದ್ಧ ರಿಸುತ್ತ ನಂಬದೆ ಉಪೇಕ್ಷಿಸುವವರನ್ನು ಶಿಕ್ಷಿಸುತ್ತ ಇಡೀ ಕರಾವಳಿಯುದ್ಧಕ್ಕೂ ಮನೆ ಮಾತಾಗಿದ್ದಾರೆ. ಹಾಗೆಯೇ ಅಂಪಾರಿನ ಈ ದೇವಿಯ ದೇಗುಲವು ಕೂಡ ಈ ವಿಚಾರದಲ್ಲಿ ಮಂಚೂಣಿಯಲ್ಲಿದೆ. ಇಲ್ಲಿನ ಅರ್ಚಕ ವರ್ಗದಲ್ಲಿ ತಲಾ ತಲಾಂತರದಿಂದ ನಾಗಾರಾಧನೆ ನಡೆದುಕೊಂಡು ಬಂದಿರುವುದರಿಂದ ಶ್ರೀ ನಾಗದೇವತಾರಾಧನೆ ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿನ ವ್ಯವಸ್ಥಾಪಕ ಟ್ರಸ್ಟಿ ಆಗಿರುವ ಶ್ರೀ ರವಿರಾಜ್ ಭಟ್ ರವರು ಸ್ವತಃ ನಾಗನ ಅನುಗ್ರಹಕ್ಕೆ ಪಾತ್ರರಾಗಿರುವ ನಾಗ ಪಾತ್ರಿಗಳಾಗಿರುವುದರಿಂದ ಇಲ್ಲಿ ನಾಗದೇವರ ಸಂಬಂಧಿತ ಹಲವಾರು ಸೇವೆಗಳು ನಡೆಯುತ್ತಲೇ ಇರುತ್ತದೆ. ಇಲ್ಲಿನ ಮೂಲ ಕ್ಷೇತ್ರದಲ್ಲಿ ತುಂಬಾ ಜನ ಭಕ್ತಿ ಭಾವದಿಂದ ಹರಕೆ ಹೊತ್ತು ವಿಗ್ರಹಗಳನ್ನು ಪ್ರತಿಷ್ಟಾಪಿಸಿ ಸೇವೆಗಳನ್ನು ಕೊಟ್ಟು ತಮ್ಮ ತಮ್ಮ ಇಷ್ಟಾರ್ಥ ಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
![Devi](https://www.shrimahishamardini.org/wp-content/uploads/2023/02/Devi-1.jpg)